tag:blogger.com,1999:blog-3455566237837454475.post1488925343171326370..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ- ೪೭Shreehttp://www.blogger.com/profile/11541927845221428283noreply@blogger.comBlogger4125tag:blogger.com,1999:blog-3455566237837454475.post-40869074930087824552008-04-07T07:49:00.000+05:302008-04-07T07:49:00.000+05:30ವಲಸೆ ಹಕ್ಕಿಈವರೆಗೆ ಯಾರೂ ತುಳಿಯದ ದಾರಿನಭಗಳ ಮೀರಿ ಹೋಗೋ ವಲ...ವಲಸೆ ಹಕ್ಕಿ

ಈವರೆಗೆ ಯಾರೂ ತುಳಿಯದ ದಾರಿ
ನಭಗಳ ಮೀರಿ ಹೋಗೋ ವಲಸೆ
ಏನೇನೋ ಇದ್ದು ಕನಸುಗಳನು ಹೊದ್ದು
ಮುಂದಿನದು ಸರಿ ಎನುವ ವರಸೆ.

ಪಲಾಯನವಲ್ಲ ಬದುಕಿನೊಂದು ಭಾಗ
ಎಲ್ಲಿ ಬೆಚ್ಚಗಿದೆಯೋ ಅಲ್ಲಿಯದೇ ಸೊಗಸು
ಮನದಾಳದ ಮೊಳಕೆ ಚಿಗುರದಿಹ ತಂಪಿರೆ
ಹುಟ್ಟುವುದು ಹೇಗೆ ಬಣ್ಣದಾ ಕನಸು.

ವಲಸೆಯ ಬದುಕಿನ ವರೆಸೆಗಳು ಹಲವು
ಮಗ್ಗುಲು ಬದಲಿಸಿ ಮಲಗುವಲ್ಲಿಂದ ಹಿಡಿದು
ಅದೆಲ್ಲೋ ಅವಕಾಶ ಕೈ ಹಿಡಿದು ಕರೆಯುವ
ಗೋಲದ ಮತ್ತೊಂದು ಮಗ್ಗುಲಿಗೆ ನಡೆದು.

ಹಿಂದು ಮುಂದಾದರೂ ಏಕೆ ನೋಡಬೇಕು
ತಮ್ಮವರೆಂಬ ಕೊರಗೇ ಇಲ್ಲದಂತಾಗಿರುವಾಗ
ಭೂಮಂಡಲದ ಮೇಲೆ ನಾವು ನಾವೇ ಬರೆದ
ಗೆರೆಗಳನ್ನು ಮೀರಿ ಹಾರುವ ನಭವಿರುವಾಗ.

ಮೋಡಗಳ ಹಿನ್ನೆಲೆ ಬರೀ ನೆಪಕ್ಕೆ ಮಾತ್ರ
ಹಾರುವ ನಮಗೂ ಗೊತ್ತು ಹಿಂದಿರುವ ನೀಲಿ
ಹಾರುತ ಹಾರುತ ದೂರದೂರನು ಸೇರಿಯೂ
ಮನದ ಮೂಲೆಯಲ್ಲಿ ಅಡಗಿದೆ ಚಿಂತೆಯ ಸೆಲೆ.Satishhttps://www.blogger.com/profile/18348145837047496415noreply@blogger.comtag:blogger.com,1999:blog-3455566237837454475.post-74725970675496568872008-04-05T06:42:00.000+05:302008-04-05T06:42:00.000+05:30** ಹಾರುವ ಬಾರಾ **ಹಾರಿ ಬಾ ಜೊತೆ ಸೇರು ಬಾಹಾರಿಹೋಗಿ ಗಗನದಲ...** ಹಾರುವ ಬಾರಾ **

ಹಾರಿ ಬಾ ಜೊತೆ ಸೇರು ಬಾ
ಹಾರಿಹೋಗಿ ಗಗನದಲಿ ಆಡೋಣ ಬಾ
ಸಪ್ತಸಾಗರ ದಾಟಿದ ಮುಗಿಲು
ಚದುರಿ ಚಿತ್ತಾರದಿ ಬಿತ್ತರಗೊಂಡಿದೆ ನೋಡ

ಸುಪ್ತ ನೀಲಾಕಾಶದಲ್ಲಿ ತೇಲಿ ಹಾರಿ
ಹಾಡೋಣ ಬಾ ಜೊತೆಗೂಡಿಗೂಡಿ
ಸಪ್ತಸ್ವರಗಳನು ಸಿರಿಕಂಠದಲ್ಲಿ ಹಾಡಿ
ಭಾವಬೀರಿ ನಲಿದಾಡಿ ಮೆರೆಯೋಣ ಬಾ

ಮುಕ್ತ ಭಾವದಲಿ ರಕ್ಕೆ ಬೀಸುತ್ತ ಬಾ
ಎತ್ತರದಲ್ಲಿ ಕೂಟ ಮಾಡೋಣ ಬಾ
ಅಸೀಮ ಬಯಲಲ್ಲಿ ಅನಂತ ಚೇತನದಿ
ಸಂಚಾರ ನಡೆಸೋಣ ಹಾರಿ ಹಾರಿ ಬಾ

ಚತುರ ಚೆಲ್ಲಾಟ ಗಗನದಲಿ ಹಾರಾಟ
ಜೊತೆಸೇರಿದರೆ ನಾವೆಲ್ಲ ಎಂತಾ ಓಲಾಟ
ಸೇರು ಬಾರ ನಡೆಸೋಣ ಕಮ್ಮಟ
ಕುಶಲ ಕೇಳುತ ಒಲವ ತೋರುವ ಬಾರ

ಮೇಲೇರಿ ಬಾರ.. ತಂಪು ಬೀರಿಹುದು
ಮೋಡಗಳ ಸಂದಿಯಲಿ ಸುರುಗೋಣ ಬಾ
ತೇಲೋ ಮುಗಿಲಿನ ಜೊತೆಯಲ್ಲಿ ತೇಲೋಣ
ಬಾನಯಾನವನು ಸಂಘದಿ ಮಾಡೋಣ

ಇಳೆಯನ್ನ ಇಣುಕೋಣ ಮೇಲೇರಿ ಹೋಗಿ
ಕಾಣೋಣ ಸೊಬಗ ಹೊಸ ರೂಪವನ್ನ
ಪಿಸುಮಾತನಾಡುತ್ತ ಗುಟ್ಟನ್ನು ಹೇಳುತ್ತ
ಸೇರುಬಾರ ಸಾಗೋಣ ಮುಂದೆ ಮುಂದೆ

ಸಾಲು ಸಾಲಾಗಿ ಶಿಸ್ತಿನಲಿ ಸೇರಿ
ಗಾಳಿ ಗೋಪುರದಲ್ಲಿ ಏರಿ ಏರಿ
ರವಿಯ ಜೊತೆ ಕಣ್ಣು ಮುಚ್ಚಾಲೆ ಆಡಿ
ಸೋಜಿಗದ ಮೋಜು ಮಾಡುವ ಬಾರ

ಈತೀರದಿಂದ ಆತೀರಕೆ ಹೋಗಣ
ಹೊಸ ಲೋಕದಲಿ ಬದುಕ ನಡೆಸೋಣ
ಅಲ್ಲಿ ಸಂಸಾರ ಹೂಡಿ ವಂಶಬೆಳೆಸೋಣ
ಬದುಕಿನ ಬಾಂಧವ್ಯ ಸಿರಿಯಲ್ಲಿ ಬಾಳೋಣ

** ಕುಕೂ....
ಪುಣೆ.......
05/04/08ಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-3455566237837454475.post-91201536728576896552008-04-03T10:02:00.000+05:302008-04-03T10:02:00.000+05:30ಮುಸ್ಸಂಜೆಯ ಹೊತ್ತಿನ ಮೋಹಕ ಸಮಯದಿನದ ಖುಷಿಯಲಿ ಮಿಂದೆದ್ದ ಹರ...ಮುಸ್ಸಂಜೆಯ ಹೊತ್ತಿನ ಮೋಹಕ ಸಮಯ
ದಿನದ ಖುಷಿಯಲಿ ಮಿಂದೆದ್ದ ಹರುಷ
ನಾಳೆಯ ಬಗ್ಗೆ - ಆಲೋಚನೆಯೆಲ್ಲಾ ನಾಳೆ
ಕೇವಲ ಹಾರಟಕ್ಕೆ ಗಮನ ಈ ಕ್ಷಣRohithhttps://www.blogger.com/profile/01191907199654678626noreply@blogger.comtag:blogger.com,1999:blog-3455566237837454475.post-38702364089123702322008-04-02T13:31:00.000+05:302008-04-02T13:31:00.000+05:30ಹಾರುವ ಬಾರಾ ಹಾರುವ ಬಾಜಂಟಿ ಹಕ್ಕಿಒಂಟಿ ಹಕ್ಕಿಜೋಡಿ ಹಕ್ಕಿಬ...ಹಾರುವ ಬಾರಾ ಹಾರುವ ಬಾ

ಜಂಟಿ ಹಕ್ಕಿ
ಒಂಟಿ ಹಕ್ಕಿ
ಜೋಡಿ ಹಕ್ಕಿ
ಬೋಡಿ ಹಕ್ಕಿ
ಅಕ್ಕಿಯ ಹೆಕ್ಕುವ ಹಕ್ಕಿ
ಹಕ್ಕಿಯ ಹಕ್ಕನು ಅರಿತಿಹ ಹಕ್ಕಿ
ನಾ ಹಕ್ಕಿ ನೀ ಹಕ್ಕಿ
ಅಕ್ಕನೊಬ್ಬಳು ಹಕ್ಕಿ
ಅಣ್ಣನೊಬ್ಬನು ಹಕ್ಕಿ
ಅಮ್ಮ ಅಪ್ಪ ಹಕ್ಕಿ

ಎನ್ನ ಹಿಂದೆ ನೀ ಬಾರಾ
ಅವನ ಮೇಲೆ ನೀ ಏರು
ನಿಶ್ಶಕ್ತನ ಕೈ ಹಿಡಿದೆತ್ತು
ಗುರಿಯೊಂದನೇ ಕಾಣುವಾ

ಬಾಣದೋಪಾದಿಯಲಿ ನುಗ್ಗುವ
ಇಂದ್ರಚಾಪವ ಲೋಕಕೆ ತೋರುವಾ
ಮೇಲಿರುವುದು ತಂಪಿನ ಮೇಘ
ಅದರ ಮೇಲಿಹುದು ನಿಶ್ಶಕ್ತ ರವಿ

ಸುಡು ಸುಡು ಬಿಸಿಲು
ನೇಸರನ ಸಂಚು ರಣರಂಗವ ಮಾಡಲು
ಮೋಡಗಳು ಪ್ರಖರತೆಯ ತಡೆಯಲು
ಹೊರಟಿಹವು ಒಂದರ ಹಿಂದೊಂದು
ಸಾಥಿ ನೀಡಲು ಇರುವಾ ನಾವು ಕೆಳಗೆ
ಮೋಡಗಳು ಕಾಲು ಸೋತಾಗ
ರವಿಯ ಎದುರಿಸುವಾ
ಬನ್ನಿ ನಾವೆಲ್ಲ ಒಂದಾಗಿರುವಾ

ಬನ್ನಿ ಬನ್ನಿ ಓ ನೋಡುಗರೇ!!!
ಕತ್ತಲಾಗುತ್ತಿಲ್ಲ
ಮಲಗುವ ವೇಳೆಯಾಗುತ್ತಿಲ್ಲ
ಬಿರಿ ಬಿರಿ ಬಿರಿಯುತಿರುವ
ಭೂಮಿಗೆ ನೀರನುಣಿಸಲು
ಹೊರಟಿಹ ಮೋಡಗಳಿವು
ಸೂರಜನ ಮರೆಮಾಚುತಿಹವು
ಹೋಗದಿರಿ
ಮೋಸ ಹೋಗದಿರಿ
ಮನೆಗೆ ಹೋಗದಿರಿ
ನಿಮ್ಮೂಟವ ಹುಡುಕಿರಿ
ನಮ್ಮೊಡನೆ ಸಾಥಿಯ ನೀಡಿರಿbhadrahttps://www.blogger.com/profile/13079618890372528165noreply@blogger.com