tag:blogger.com,1999:blog-3455566237837454475.post314053474461718018..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ - ೪೧Shreehttp://www.blogger.com/profile/11541927845221428283noreply@blogger.comBlogger5125tag:blogger.com,1999:blog-3455566237837454475.post-76474142741084369422008-03-12T03:14:00.000+05:302008-03-12T03:14:00.000+05:30This comment has been removed by a blog administrator.Madhuhttps://www.blogger.com/profile/04913681447290683123noreply@blogger.comtag:blogger.com,1999:blog-3455566237837454475.post-73502666967679832452008-02-25T11:53:00.000+05:302008-02-25T11:53:00.000+05:30ಅದೇನರೆ ಇದ್ದೀತ ತಂಗಿ ಮಜಬೂರಿಅಪ್ಪ ಅವ್ವನ ಬಿಟ್ಟು ನಿನ್ನ ಬ...ಅದೇನರೆ ಇದ್ದೀತ ತಂಗಿ ಮಜಬೂರಿ
ಅಪ್ಪ ಅವ್ವನ ಬಿಟ್ಟು ನಿನ್ನ ಬೆನ್ನೇರೆದ ಸವಾರಿ
ಗಿರಿಗಿಟ್ಲಿ, ಗೊಂಬಿ, ಥರಥರಾ ಆಟಿಕಿ
ಇಟಗೊಂಡು ಆಡೊ ವಯಸ್ಸಿಗೆ ಬೆಟ್ಟ
ಹೊರಬೇಕಾಗಿದ್ದದು ಯಾರದೋ ಹುಕಿ
ಮುಂದೊಂದು ದಿನ ಬರಬೇಕಾಗಿದ್ದು
ಈಗ ಬಂದದ ನೋಡ ನಿನಗ
ಮಗೀನ ಹೊರೋ ವಯ್ಸಲ್ಲ ಆದ್ರೂ
ಹೆತ್ತವರ ಭಾರಕ ಹೆಗಲ ಕೊಟ್ಟೇನ ತಾಯಿAnonymoushttps://www.blogger.com/profile/10385932234834913513noreply@blogger.comtag:blogger.com,1999:blog-3455566237837454475.post-58666058810400056982008-02-25T07:06:00.000+05:302008-02-25T07:06:00.000+05:30ಯಾರೂ ಹೋಗದ ದಾರಿಚಿಕ್ಕ ವಯಸಿಗೇ ಭಾರವನು ಹೊತ್ತೆ ತಾಯಿಬಿಡಲೊ...ಯಾರೂ ಹೋಗದ ದಾರಿ

ಚಿಕ್ಕ ವಯಸಿಗೇ ಭಾರವನು ಹೊತ್ತೆ ತಾಯಿ
ಬಿಡಲೊಲ್ಲದು ನಿನ್ನ ಬೆನ್ನಿಗಂಟಿದಾ ಬಾಯಿ
ನೀನು ಕುಳ್ಳೋ ನಿನ್ನ ನೆರಳು ಕುಳ್ಳೋ
ಬೆನ್ನಿಗೇರಿಸಿದ ಅಪ್ಪ ಅಮ್ಮ ಮರುಳೋ.

ಛಳಿ ಇರುವ ಲೋಕಕ್ಕೆ ಹಸನಾದ ಹೊದಿಕೆ
ಬಿಸಿಲಿಗೋ ಇರಬೇಕು ಬಗೆಬಗೆಯ ಮಡಿಕೆ
ಹೂಡಿಕೆ ಕೂಡಿಕೆ ಎಂದು ದಿಕ್ಕು ದೆಸೆ ಬಗೆದರು
ಮರುಕ ಹುಟ್ಟಿದವನೆಲ್ಲ ಬೀದಿಗೆತ್ತಿ ಎಸೆದರು.

ನೀ ಮುಂದೋ ತಾ ಮುಂದೋ ಎನುವ ಲೋಕ
ರೂಪ ಭಾಷೆ ಬಣ್ಣಗಳೋ ಅನೇಕಾನೇಕ
ಬಡತನವು ಬುದ್ಧಿಗಂಟಿದ ಭ್ರಮೆಯಂತೂ ಅಲ್ಲ
ಇಲ್ಲದವರಿಗೆ ಇರುವುದನು ಹಂಚುವ ಕಾಲವಿಲ್ಲ.

ದಾರಿ ರೂಪಿಸಿಕೊಂಡು ಹೊಟ್ಟೆ ತುಂಬುವುದು ಬಾಳು
ನಮ್ಮ ನೆರಳನು ನಾವು ಮೀರಿ ನಡೆದರೆ ಹಾಳು
ಸುತ್ತಲೂ ಬೆಳಕಿರುವ ಜಗವಾದೀತು ಉದಾರಿ
ಯಾರೂ ಹೋಗದ ಎಲ್ಲ ಕಡೆಗೆ ಹುಟ್ಟೀತೆ ದಾರಿ.Satishhttps://www.blogger.com/profile/18348145837047496415noreply@blogger.comtag:blogger.com,1999:blog-3455566237837454475.post-26181706132063872492008-02-23T22:02:00.000+05:302008-02-23T22:02:00.000+05:30ಸ್ವಗತ:ಪುಟ್ಟ ಬೆನ್ನಿಗಿದ್ದಾನೆ,ಈಚೀಚೆಗಷ್ಟೇ ಹುಟ್ಟಿದ್ದು,ಹ...ಸ್ವಗತ:

ಪುಟ್ಟ ಬೆನ್ನಿಗಿದ್ದಾನೆ,
ಈಚೀಚೆಗಷ್ಟೇ ಹುಟ್ಟಿದ್ದು,
ಹೋದ ಮಳೆಗಾಲದಲ್ಲಿ,
ಈಗ ಬಿರುಬಿಸಿಲ ಬೇಸಿಗೆ
ಅಮ್ಮ ರಸ್ತೆ ಕೆಲಸಕ್ಕೆ.
ನನ್ನ ಬೆನ್ನಿಗೆ
ಪುಟ್ಟನ ಬುಟ್ಟಿ
ಕೈಗೆ ಜೋತಿಷದ ಮಣಿಸರ
ಕಾಲ ಕೆಳಗಣ ನೆರಳು
ಪುಟ್ಟಕಿದೆ ನಮ್ಮಂತೆ
ದಾರಿ ದೂರವಿದೆ
ಬಿಸಿಲು ಹರಡಿದೆ
ಸುತ್ತ ದೊಡ್ಡವರ ಸಂತೆ
ಕೇಳಬೇಕಿದೆಯಾ ಬನ್ನಿ
ಹೇಳಬಲ್ಲೆ ನಿಮ್ಮ ನಾಳಿನ ಕತೆ.
ನಮ್ಮದೇನಿದೆ!
ನಿನ್ನೆಗಳ ನೆನಪಿಲ್ಲ
ನಾಳೆಗಳ ಕಾಯುವುದಿಲ್ಲ
ಇಂದಿನ ತುತ್ತಿನ ಚೀಲ ಎಂದಿಗೂ ತುಂಬುವುದಿಲ್ಲ..
ಏನಾದರಾಗಲಿ,
ಈ ಬಿಸಿಲು ಕಳೆದ ಕೂಡಲೇ
ಓಡಬೇಕಿದೆ ಅಲ್ಲಿಗೆ..
ಬಿಡಾರದ ಹತ್ತಿರ
ಹೊಂಗೆಯ ನೆರಳಲಿ
ಅಪ್ಪ ಕಟ್ಟಿದ ಸೀರೆ ಜೋಲಿ
ಹೊಟ್ಟೆ ಹಸಿದರೇನಂತೆ,
ಜೀಕುತ್ತಿದ್ದರೆ ತಂಪು ಗಾಳಿ
ಬಿಳಿ ಬಿಳಿ ಹೂವಿನೋಕುಳಿ,
ಪುಟ್ಟನಿಗೂ ನಗೆ
ಕೆನ್ನೆ ತುಂಬ ಕುಳಿ..ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-3455566237837454475.post-37568840925586655282008-02-21T23:01:00.000+05:302008-02-21T23:01:00.000+05:30ಅನಾಥರು...ದಿಕ್ಕಿಲ್ಲದ ಅನಾಥೆ ನೀನು ದಿಕ್ಕು ಹುಡುಕುತ ನಿಂತ...ಅನಾಥರು...

ದಿಕ್ಕಿಲ್ಲದ ಅನಾಥೆ ನೀನು
ದಿಕ್ಕು ಹುಡುಕುತ ನಿಂತೆ
ದೂರ ದಾರಿಯ ನಡುವೆ
ದಕ್ಕದ ಖುಷಿಯ ಬೆದಕುತ

ಎತ್ತಹೋಗಲು ದಿಕ್ಕು ಕಾಣದಿರಲು
ದಿಟ್ಟಿಸಿರುವೆ ಅತ್ತ ಇತ್ತಲು
ನೀಳ ಉಸಿರಲು ದಿಟ್ಟೆ ನೀನು
ನಿಲ್ಲೇನೆಂದೂ ಶಪತ ನಿನ್ನೋಳು

ನಿನಗೆ ನೀನೆ ಭಾರ
ನಿನಗಲ್ಲ ಇವನೊಬ್ಬ ಭಾರ
ಜೊತೆಗೂಡಿದ ಅನಾಥನ
ಹೊತ್ತು ಹೋಗುವೆ ದೂರ

ಬಿಡದೆ ಬೆನ್ನತ್ತಿಹುದು ಕಷ್ಟ
ನಿನ್ನ ನೆರಳಂತೆ ಹಿಡಿದು
ಒಡಲ ಹಸಿವಿನ ಜ್ವಾಲೆ
ಸುಡುವ ಬಿಸಿಲಿನಂತಿಹುದು

ಟೊಂಕಕ್ಕೆ ಕಟ್ಟಿ ಅರಿವೆ
ಗಂಟು ಹಾಕಿ ಬಿಗಿತಪ್ಪದಂತೆ
ಟಂಕವಾದರೇನಂತೆ ಜೋಲಿ ತಪ್ಪದೆ
ಜೊತೆಗೆ ಕರೆದೊಯ್ಯುವೆ ಅವನನು

ಎಲ್ಲೋ ಬಿದ್ದ ಬಣ್ಣದ ಬಟ್ಟೆ
ಎಕ್ಕಿ ಹುಟ್ಟಿರುವೆ ಚಂದದಿ
ತಲೆಗೆ ಕಟ್ಟಿರುವೆ ಅರಿವೆ
ಬಿಸಿಲಿಂದ ರಕ್ಷಣೆ ಅರಸಿ

ಎಲ್ಲಿ ಹೋದರು ಜನ್ಮದಾತರು
ಕಾಡುವ ಅಗೋಚರ ಭಾವದೋಳ್
ಹುಡುಕಿ ಅವರನು ಎಲ್ಲರೊಳ್
ಬಿಡದೆ ನಡೆಸಿರುವೆ ಬದುಕನು

ಒಡಲಚೀಲವ ತುಂಬಿಸಲು
ಗಂಗಳ ಹಿಡಿದು ಕರಗಳಲ್ಲಿ
ಬೇಡುವೆ ಬಯಲಲ್ಲಿ ದಿನವು
ನೊಡುವ ಮನವು ಕರಗುವಂತೆ

ನಿನ್ನ ಕಂಡ ಕ್ಷಣ ಮನವು
ಕೆಂಡವಾಯಿತು ಕಾರಣ ನೆನದು
ಬಂದು ಬಿಡು ನನ್ನ ಜೊತೆಗೆಂದು
ಕರೆವ ದೈರ್ಯ ಸಾಲದು ಯಾಕಿನ್ನು??

ಸಾಲದೆನ್ನದಂತೆ ಇದ್ದು ಎಲ್ಲದು
ಸಾಲದೇಕೋ ಕರುಣೆ ನನ್ನೋಳು
ನಿನ್ನ ಬವಣೆಯ ಹಂಚಿಕೊಳ್ಳಲು
ಯಾಕೆ ನನ್ನೋಳು ಮೀನಾ ಮೇಷವು??

ಸೂರು ಇಲ್ಲದೆ ತಿರೆಯೋಳ್
ಯಾರು ಇಲ್ಲದ ಅನಾಥೆ ನೀನು
ಸಾರವಿಲ್ಲದೆ ಬದುಕಿ ನಡೆಯುವ
ಭಾವ ಶೂನ್ಯ ಅನಾಥ ನಾನು !!ಕುಕೂಊ..https://www.blogger.com/profile/07314137566666903061noreply@blogger.com