tag:blogger.com,1999:blog-3455566237837454475.post3672612083026963507..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ ೬೨Shreehttp://www.blogger.com/profile/11541927845221428283noreply@blogger.comBlogger3125tag:blogger.com,1999:blog-3455566237837454475.post-56186205106826882792008-07-23T19:05:00.000+05:302008-07-23T19:05:00.000+05:30ಚಿತ್ರ ಕವನ ಎರಡು ಚನ್ನಾಗಿದೆ...ಚಿತ್ರ ಕವನ ಎರಡು ಚನ್ನಾಗಿದೆ...ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-3455566237837454475.post-91100742804903980802008-07-21T07:52:00.000+05:302008-07-21T07:52:00.000+05:30ಕಂಬಿಯ ಹಿಂದೆ ನಿಂತಿಹ ಪೋರಅಲ್ವೋ ಪೋರ ನಿನ್ನ ವಾರಸೆಯವರಜೊತೆ...ಕಂಬಿಯ ಹಿಂದೆ ನಿಂತಿಹ ಪೋರ

ಅಲ್ವೋ ಪೋರ ನಿನ್ನ ವಾರಸೆಯವರ
ಜೊತೆ ಹೊರಗೆ ಆಡಿಕೊಳ್ಳೋದ್ ಬಿಟ್ಟು
ಮಹಾ ನಿರೀಕ್ಷೆಯನು ಹೊತ್ತ ಕಣ್ಣ ಬೊಂಬೆ
ಮುಖದಲ್ಲಿ ದೊಡ್ಡ ಶಾಂತಿಗೆ ಜಾಗ ಕೊಟ್ಟು
ಹೋಗೀ ಹೋಗಿ ಯಾವುದೋ ಬಯಲಿನಲಿ
ವರಸೆಗಳ ಬಿಚ್ಚೋ ಬದಲು ಹೀಗೆ ಅಡಗೋದೇ?

ಅದ್ಯಾವ ಗಂಡಾಂತರ ಬಂದು ಬಿಡಬಹುದು
ಅದೇನು ಕೇಡು ಕಾದು ಕುಳಿತಿರಬಹುದು
ಕುಣಿದು ಕುಪ್ಪಳಿಸುವ ಬಾಲಕ ಕಂಬಿಯ ಹಿಂದೆ
ಚಕ್ರಾಧಿಪತಿ ಸ್ನಾನದ ಸಮಯಕೆ ಕಿರೀಟ ತೊಟ್ಟಂತೆ.

ಅಡ್ಡ ಉದ್ದಗಲಕ್ಕೂ ಹೆಣೆದ ತಂತಿಗಳು ಕಂಬಿಗಳು
ಯಾವ ಸ್ವಾತಂತ್ರ್ಯವನ್ನೂ ಹೊರಗೆಡುಹದ ಜಂತಿಗಳು
ತಬ್ಬಲಿತನವೆನ್ನುವುದು ಬರೀ ಮನಸಿನಾ ಸೋಗು
ಒಂದೇ ಕಡೆ ಗೂಡುಕಟ್ಟಿ ಅಲ್ಲಿಲ್ಲಿ ಸುತ್ತಿದಿಹ ಕೊರಗು
ಚಲನವೆನ್ನುವುದಕೆ ಒಂದು ನೆಲೆ ಇದ್ದಂತೇನಿಲ್ಲ
ನಿಂತಲ್ಲೇ ನಿಂತು ಚಿಂತಿಸುವುದಕೆ ಫಲವಿಲ್ಲ.

ಏನೂ ಮಾಡದೆ ಇದ್ದಲ್ಲೇ ಇರುವುದು ಒಂದು ಆಯ್ಕೆ
ಕಷ್ಟವೋ ಸುಖವೋ ಬೇರೆ ದಾರಿಯ ಹುಡುಕುವ ಬಯಕೆ
ಇಷ್ಟ ಪಟ್ಟು ಯಾವುದೋ ಒಂದು ದಾರಿಯ ಹಿಡಿದ ಮೇಲೆ
ಎಲ್ಲೋ ಬಾಗಿಲುಗಳು ತಂತಾನೆ ತೆಗೆದುಕೊಳ್ಳುವ ಲೀಲೆ.Satishhttps://www.blogger.com/profile/18348145837047496415noreply@blogger.comtag:blogger.com,1999:blog-3455566237837454475.post-4767842924645734322008-07-20T18:50:00.000+05:302008-07-20T18:50:00.000+05:30ಪೋಷಣೆ೨೪ ಲೋಹದ ಸಲಾಕೆಗಳ ಚೌಕದೊಳಗೆಹಿಡಿದಿಟ್ಟ ಚೇತನದ ಮುಖವಾ...ಪೋಷಣೆ

೨೪ ಲೋಹದ ಸಲಾಕೆಗಳ ಚೌಕದೊಳಗೆ
ಹಿಡಿದಿಟ್ಟ ಚೇತನದ ಮುಖವಾಡ
ಫಳಫಳಿಸುವ ಕಂಗಳು
ಎತ್ತಲೋ ಕಣ್ ನೋಟ
ಇನ್ನೆತ್ತಲೋ ಮನದೋಟ
ಚಂಚಲ ಚಿತ್ತವಾದರೂ ಅರಸುತಿಹುದೇನು?

ಅಮ್ಮನ ಎದುರು ನೋಡುವಿಕೆಯೇ?
ತಿನಿಸು ತರಹೋದ ಅಕ್ಕನ ನಿರೀಕ್ಷೆಯಾ?
ಹೊಸ ಪಾಟಿ ಪುಸ್ತಿಕೆ ತರುವ ಅಪ್ಪನಾ?
ಒಮ್ಮಿಂದೊಮ್ಮೆಲೇ ಕಾಣದಾದ ಜಗವಾ?

ಅದೆತ್ತಲಿಂದ ಬಂತದು ಗಾಳಿ ಮಳೆ?
ಬಿಡಲಾಗದ ಕಣ್ಣನೂ ಝಗ್ಗೆನಿಸಿದಾ ಪ್ರವಾಹ
ಎವೆ ಮುಚ್ಚಿ ಬಿಡಲು
ಕಂಡಿದ್ದೆಲ್ಲವೂ ಕಾಣದಾಯಿತಲ್ಲ!
ಏನಾಯಿತು?
ಎಲ್ಲಿ ಹೋಯಿತು?

ಯಾವ ವಸ್ತುವಿನ ಪರದೆಯಲಿ ಈ ಕಣ್ಮುಚ್ಚಿದರೇನು
ಪುಟ್ಟನ ನೋಟವ ಹಿಡಿಯಲಾದೀತೇ?
ಕಂಗಳ ನೋಟ ಬದಲಿಸಲಾದೀತೇ?
ಆಸೆ ಆಕಾಂಕ್ಷೆಗಳ ಹೊತ್ತಿರುವ,
ಸಾಧಿಸದಿರುವುದ ಸಾಧಿಸುವ
ಪಣ ತೊಟ್ಟಿರುವ ಮನವ ಸೆರೆಹಿಡಿಯಲಾದೀತೇ?

ನಿಸರ್ಗ ಘೋರತೆಗೆ ಬಲಿಯಾದ ಪುಟ್ಟ ಕಂದಮ್ಮನ
ಮರಳಿ ಬಾಳ್ವೆ ಪಥದಲಿ ಇರಿಸಲು
ಇಂತಹ ಮನಕೆ, ತನುವಿಗೆ ನೀರೆರೆದು ಉಣಿಸಿ ತಣಿಸಿ ಪೋಷಿಸುವುದು
ಎಮ್ಮ ಕರ್ತವ್ಯ ಅಲ್ವೇ?

ಪೋಷಿಸಿ! ಎಮ್ಮನು ನಿಲ್ಲಿಸಿರುವ
ಈ ಜಗಕೆ ಋಣ ಸಲ್ಲಿಸುವಿಕೆ
ಪೋಷಿಸಿದವರ ನೆನಪಲಿ
ನೀಡಬಹುದಾದ ತರ್ಪಣ,
ಮುಂದಿನ ಪೀಳಿಗೆಗೆ
ನಾವು ಕೊಡಬಹುದಾದ
ಕೊಡಬೇಕಾದ ನೆರವಿನ ಹಸ್ತ
ನಮ್ಮ ಕರ್ತವ್ಯ - ಅಲ್ವೇ?Unknownhttps://www.blogger.com/profile/12979926923499993369noreply@blogger.com