tag:blogger.com,1999:blog-3455566237837454475.post4167434538749310554..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ ೭೬Shreehttp://www.blogger.com/profile/11541927845221428283noreply@blogger.comBlogger3125tag:blogger.com,1999:blog-3455566237837454475.post-64856735547640406262008-11-08T11:11:00.000+05:302008-11-08T11:11:00.000+05:30ಬೆಳಗುಂಟು ಕತ್ತೆಲೆಯ ಒಡಲಾಳದಿಕತ್ತಲೆಯುಂಟು ಬೆಳಗಿನ ಬುಡದಲ್...ಬೆಳಗುಂಟು ಕತ್ತೆಲೆಯ ಒಡಲಾಳದಿ
ಕತ್ತಲೆಯುಂಟು ಬೆಳಗಿನ ಬುಡದಲ್ಲಿ
ನಗುವುಂಟು ನೋವಿನಾಟದಲೂ
ಏನುಂಟು ಏನಿಲ್ಲ ಬದುಕಲ್ಲಿ ತಿಳಿಯಲಾಗದು

ಹಸಿವುಂಟು ಹಂಬಲಿಸಿ ಕೂಳು ಹುಡುಕಲು
ನೋವುಂಟು ಕಳೆದ ನಲಿವನುಡುಕಿಸಲು
ಅಳುವುಂಟು ನಗುವಿನ ದಾರಿ ತೋರಲು
ಬವಣೆಯುಂಟು ಬದುಕಿನ ಹೆದ್ದಾರಿಯಾಗಲು

ಬೆಳಗಿದೆ ನನಗಿರುವ ಕತ್ತಲಾದಿಯಲ್ಲಿ
ನಡೆವೆ ದೂರ ದೂರಕೆ ಅಷ್ಟೆ ಸಾಕಲ್ಲವೆ?
ಕಣ್ಣಲ್ಲಿ ಗೆಲುವುಂಟು ಕಾಣುವ ಕಾತುರ ಉಂಟು
ಕಾದಾಡುವೆ ಬದುಕಿನಲಿ ಗುರಿಯ ಕಾಣಲು

ಬವಣೆಯಲ್ಲೂ ಬಳಲಿಕೆಯಲ್ಲೂ ಕಾಣುವೆ ಬೆಳಕನು
ಕಿರಿದಾದರೇನು ಹಿರಿದಾದರೇನು ದಾರಿತೋರದೇನು?
ಹುಟ್ಟಿರುವೆ ಗೆಲುವಲು, ಇದುವೆ ನಾಕಾಣುವೆ
ಗೆಲುವೆಂದು ನನ್ನದು ಈ ಬೆಳಕೇ ಮುನ್ನಡೆಸುವುದುಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-3455566237837454475.post-20962294874752105502008-10-31T21:41:00.000+05:302008-10-31T21:41:00.000+05:30ಎರಡು ದೀಪಗಳುನಾವು ಹಚ್ಚಿಟ್ಟ ಹಾಗೆ ಉರಿವಉರಿದು, ಬೆಳಗುವ ಈ ...ಎರಡು ದೀಪಗಳು

ನಾವು ಹಚ್ಚಿಟ್ಟ ಹಾಗೆ ಉರಿವ
ಉರಿದು, ಬೆಳಗುವ ಈ ದೀಪ
ಆ ದೀಪ ಪ್ರದೀಪ - ಸಂದೀಪ
ತನ್ನತನವ ಬದಿಗೊತ್ತಿ
ಜಗವ ಬೆಳಗಿಸುವ ಈ ದೀಪಗಳು

ಒಂದಕೆ ಬೆಂಕಿಯೆಂಬ ಹೊತ್ತಿಸುವಿಕೆ
ಇನ್ನೊಂದಕೆ ಆತ್ಮವೆಂಬ ಜಾಗೃತಗೊಳಿಸುವಿಕೆ
ಇದು ಕ್ಷಣಗಳಲಿ ನಂದುವ ದೀಪ
ಅದು ಯುಗಗಳವರೆವಿಗೆ ತೋರುವ ದೀಪ

ವಯಸ್ಸು ಕಳೆದುಕೊಳ್ಳುತಿಹ ಈ ದೀಪ
ವಯಸ್ಸು ತುಂಬಿಕೊಳ್ಳುತಿಹ ಆ ತೇಜೋದೀಪ
ತೋರಿದ ಕಡೆಗೆ ಹರಿವ ನೋಟಗಳು
ತನ್ನತನವ ತೋರ್ಪಡದಿಹ ಈ ದೀಪ
ದಿಗಂತಕೂ ಅಂತ ತೋರುವ
ಕಾತರ, ನಿರೀಕ್ಷೆ ಹೊಂದಿರುವ ಆ ದೀಪ

ಪುಟ್ಟ ದೀಪ
ಬೆಳಗುತಿಹುದು
ದೊಡ್ಡ ಕೋಣೆ
ಬೆಳಗಬಲ್ಲದು ದೊಡ್ಡ ಜಗತ್ತು
ತನ್ನ ಮನೆಯ ಕತ್ತಲಲಿಟ್ಟು
ಊರೆಲ್ಲಾ ಬೆಳಗುವುದು
ಅವುಗಳ ನಂದದಂತೆ ಕಾಪಾಡುವ

ಜಗದ ಒಳಿತಿಗಾಗಿ, ಆ ಸರ್ವಶಕ್ತನಲಿ ಬೇಡುವೆ - ಎಂದಿಗೂ ದೀಪಗಳು ನಂದದಿರಲಿ
ಹೊಳೆಯುತ, ಹೊಳೆಸುತ, ನಳಿಸುತ ದೇದೀಪ್ಯಮಾನವಾಗಿರಲಿ

ಈ ದೀಪ - ಮೋಂಬತ್ತಿ
ಆ ದೀಪ - ಪುಟ್ಟ ಪೋರUnknownhttps://www.blogger.com/profile/12979926923499993369noreply@blogger.comtag:blogger.com,1999:blog-3455566237837454475.post-75048186068907534202008-10-31T06:57:00.000+05:302008-10-31T06:57:00.000+05:30ಮೇಣದ ದೀಪದ ಬೆಳಕಿನಲ್ಲಿ ಇರುವ ಹುಡುಗನ ಮುಖದ ಮೇಲಿನ ಬೆಳಕು...ಮೇಣದ ದೀಪದ ಬೆಳಕಿನಲ್ಲಿ ಇರುವ ಹುಡುಗನ ಮುಖದ ಮೇಲಿನ ಬೆಳಕು ಹಿತವಾಗಿದೆ. ಕಣ್ಣುಗಳು ಹೊಸ ಉತ್ಸಾಹವನ್ನು ತೋರುತ್ತಿರುವಂತೆ ಕಾಣುತ್ತದೆ.
ಆಹಾಂ ! ನನ್ನ ಬ್ಲಾಗಿನಲ್ಲಿ ದೇವರಾಯನ ದುರ್ಗದ ಮಿಂಚುಗಳು ಬಂದಿವೆ. ಬನ್ನಿ.shivu.khttps://www.blogger.com/profile/02536252774463776294noreply@blogger.com