tag:blogger.com,1999:blog-3455566237837454475.post5937691519094534046..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ - 17Shreehttp://www.blogger.com/profile/11541927845221428283noreply@blogger.comBlogger7125tag:blogger.com,1999:blog-3455566237837454475.post-89590695979772253702007-09-07T08:36:00.000+05:302007-09-07T08:36:00.000+05:30ಪ್ರಶ್ನೇ ಮೇಲ್ ಪ್ರಶ್ನೇಸುಮ್ನೇ ಯಾಕ್ ಕುಂತಿ ನಡೀ ತಾಯೀಬೆಳ್...ಪ್ರಶ್ನೇ ಮೇಲ್ ಪ್ರಶ್ನೇ

ಸುಮ್ನೇ ಯಾಕ್ ಕುಂತಿ ನಡೀ ತಾಯೀ
ಬೆಳ್ಳಂಬೆಳಗು ಬಿದ್ದತಿ ಕಾಣಂಗಿಲ್ಲೇನು?
ನೆತ್ತೀ ಸುಡೋ ಬಿಸ್ಲು, ಕಂಡ್ರೂ ಕಾಣ್ದಿರೋ ಮಕ್ಳು
ಇರೋರೆಲ್ಲಾ ಇದ್ರೂ ಯಾರೂ ನೋಡಂಗಿಲ್ಲೇನು?

ಮೈಯಿನ್ನ್ ನರಾ ಕಾಣಾಕ್ ಹತ್ತಿ
ಒಣಗಿದ್ ಜೀವಾ ಜೋತ್ಗ್ಯಂಡ್ ಬತ್ತಿ
ಹೋದದ್ದೆಲ್ಲಾ ಹಳೇ ನೆಪ್ಪು ಅಂತಾ ಕುಂತ್ಯೇನು?

ಜೀವಾ ಸತ್ರೂ ಬೆಳ್ಯೋ ಉಗುರಾ
ಅಸೇ ಕನ್ಸೂ ಎಷ್ಟೋ ದೂರಾ
ನಿಜಾ ತೋರ್ಸೋ ಬೆಳಕನ್ ನೀನು ನೋಡಿದ್ದೀಯೇನು?

ಬಡವ್ರ ಕಾಲು ಎಂದೂ ಮುಂದೆ
ಬಾಯಿ-ಕೈ ಇರೋವೇ ಹಿಂದೆ
ತಲೆಯಾಗೇನೂ ಇಲ್ಲಾ ಎಂದು ಯಾರದು ಅಂದೋರು?

ಮುದ್ದಿನ ಮಾತಿಗೆ ಮರುಳಾಗಲ್ಲ
ಸೀರೇ-ಹೆಂಡಕೆ ಮಾರ್ ಹೋಗಲ್ಲ
ಅಂತಾ ಹೇಳ್ತಾ ನಿನ್ನಯ ಮತವನು ಮಾರಿದ್ದೀಯೇನು?

ಕಾಲಿಗಷ್ಟೇ ಬೆಳಕನ್ನ್ ತೋರ್ಸೋ
ಪ್ರಶ್ನೇ ಮೇಲೇ ಪ್ರಶ್ನೇ ಕೇಳ್ಸೋ
ಬುದ್ದೀ ಇದ್ದೋರ್ ಹಾಗೆ ಮಾಡೋರಿಂದ ದೂರಿದ್ದೀಯೇನು?Satishhttps://www.blogger.com/profile/18348145837047496415noreply@blogger.comtag:blogger.com,1999:blog-3455566237837454475.post-35203335886985261082007-09-06T18:39:00.000+05:302007-09-06T18:39:00.000+05:30ಹೀಗೆ ಕಾಣಿಸುತ್ತೀನಷ್ಟೇ;ನನ್ನ ಹೃದಯದಲ್ಲಿನ ನೆನಪುಗಳಿಗೆ ಇನ...ಹೀಗೆ ಕಾಣಿಸುತ್ತೀನಷ್ಟೇ;
ನನ್ನ ಹೃದಯದಲ್ಲಿನ ನೆನಪುಗಳಿಗೆ
ಇನ್ನೂ ಸುಕ್ಕು ಆವರಿಸಿಲ್ಲ ನಲ್ಲಾ...
ಹೀಗಿಲ್ಲಿ ಕೂತಾಗ, ಈ ಮುದಿ ಕಣ್ಣುಗಳಿಗೆ
ಲಲನೆಯರ ಹರಿದಾಟ ಕಂಡಾಗ,
ನನ್ನ ಹರೆಯದ ದಿನಗಳ ನೆನಪಾಗುತ್ತದೆ...
ನಿನ್ನ ನೆನಪಾಗುತ್ತದೆ...

ನಾನು ಬಿಸಿಲಲ್ಲಿ ಹೋಗುವಂತಾದರೆ ನೀನು ಕೇಳುತ್ತಿದ್ದೆ:
"ನಾ ನಿನ್ನ ಛತ್ರಿಯಾಗಲೇ?
ಸಾಲು ಮರವಾಗಿ ದಾರಿಗೆ ತಂಪಾಗಲೇ?
ಅಥವಾ ಮೋಡವಾಗಿ ಆ ಸೂರ್ಯನನ್ನೇ ಮುಚ್ಚಿಬಿಡಲೇ?"
ನಿನ್ನ ಪ್ರೀತಿ ಮಾತುಗಳೇ
ನನಗೆ ಲತಾಕುಂಜವಾಗುತ್ತಿದ್ದವು.

ಆದರೆ ಹೀಗೆ ಮ್ಯಾಲಿನದ್ಯಾವುದೋ ಲೋಕಕೆ
ನನಗಿಂತ ಮುಂಚೆ ಹೊರಟು ಹೋದೆ ಯಾಕೆ?

ಹಾಂ, ಈಗ ನಾನು ಹೇಳಿದ ಮೇಲೆ ತಪ್ಪಿನ ಅರಿವಾಗಿ,
ಹಳೆಯ ಭರವಸೆಗಳ ನೆನಪಾಗಿ
ಮೋಡವಾಗಿ ಹೋಗಿ ರವಿಯನ್ನು ಮುಚ್ಚಿಬಿಟ್ಟೀಯಾ..!

ಬದುಕ ವಿಪರ್ಯಾಸಗಳಿಗೆ ದೃಷ್ಟಾಂತ ನಾನೀಗ:
ದಿನಕರನ ಕಣ್ಣು ಚುರುಕಾಗುತ್ತಿದ್ದಂತೆ
ಹೊರಬರಬೇಕು ನಾನು ದಿನವೂ...
ಬಿಸಿಲು ತಾಕಿದರೆ ಮಾತ್ರ ಈ ಸುಕ್ಕು ಚರ್ಮ
ಕೊಂಚ ಮಿದುವಾಗುತ್ತದೆ;
ಯಾರಾದರೂ ಮುಟ್ಟಿದರೆ, ತಟ್ಟಿದರೆ
ಸಧ್ಯ, ಅರಿವಾಗುತ್ತದೆ...

ನಿನ್ನ ಪ್ರೀತಿ ನೆರಳ ನೆನಪು ಸಾಕು ಬಿಡು:
ನೀನು ಬೆರಳ ನೀಡಿ ಕರೆದುಕೊಳ್ಳುವನಕ
ಬೆಚ್ಚಗೆ ಬದುಕಿಕೊಂಡಿರುತ್ತೇನೆ.

ಸಾಯುವವರೆಗಾದರೂ ಉಳಿದುಕೊಳ್ಳಬೇಕಲ್ಲ ಮಾರಾಯಾ..!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-3455566237837454475.post-71631769344000425022007-09-06T12:01:00.000+05:302007-09-06T12:01:00.000+05:30ಅರ್ಘ್ಯ ಪಾದ್ಯಚೆಲುವು,ಕಸುವು, ಚಲನಎಲ್ಲ ಕಾಲನಿಗೆ ಮಣಿದುಸುಕ...ಅರ್ಘ್ಯ ಪಾದ್ಯ

ಚೆಲುವು,ಕಸುವು, ಚಲನ
ಎಲ್ಲ ಕಾಲನಿಗೆ ಮಣಿದು
ಸುಕ್ಕಾಗಿ,ಮುದುಡಿ,ನಿಶ್ಚಲವಾಗಿ
ಕುಳಿತ ಗಳಿಗೆಯಲ್ಲೂ
ಕತ್ತಲೆಯ ಮರೆಹೋಗದೆ
ಬೆಳಕ ಬರವ ಕಾಯುತ್ತ
ಕೂತ ದೇಹದ ಗುಡಿಯ ದೇವಿಯೇ
ನಿನಗೆ ಹೊನ್ನಗಿಂಡಿಯ ಹೇಮಧಾರೆಯ
ಅರ್ಘ್ಯ ಪಾದ್ಯ..
ಇನ್ನೇನ ಕೊಡಲಿ
ಏನ ಹರಸುವೆ ಅಮ್ಮಾ..?

ಎಲ್ಲ ಸುಕ್ಕಿನ ಹಿಂದೆ ಮಿರುಗಿದ ಸೊಬಗು
ಸುಸ್ತಾಗಿ ಕೂತ ಮೈಯ ಒಳಗೆ ಅಂದು ಮೆರೆದ ಚೈತನ್ಯ
ಮಡಚಿ ಕೂತ ಕಾಲ್ಗಳ ಆಸರೆಗೆ ಅವತ್ತಿನ ನಡಿಗೆ
ಎಲ್ಲ ಕಳೆದು ಕೂತ ಭಾವದಲ್ಲಿ
ಉಳಿದೆಲ್ಲ ಪಡೆದು ಹರಿಯಿಸಿದ ಬೆಳಕ ಪ್ರಭಾವಳಿ..
ನೆರಳ ಕೊಡಲು ಬಿಸಿಲು ಬೇಕು,
ಬೆಳಕು ಹೊಳೆಯಲು ಕತ್ತಲಿರಬೇಕು..

ಹರಸಲೇನಿದೆ ಮಗುವೆ..
ಮಣಿಯುವುದು ಮುಖ್ಯ,
ಮಣಿದವಗೇ ಬೆಳಕಿನ ಸೌಖ್ಯ!ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-3455566237837454475.post-35457825995785014602007-09-06T00:00:00.000+05:302007-09-06T00:00:00.000+05:30ಇನ್ನೂ....ಹೀರಿ ಮುಗಿಸು,ಉಳಿದ ನರನಾಡಿಗಳೂ ಸೆಟೆದು ನಿಂತಿವೆ...ಇನ್ನೂ....
ಹೀರಿ ಮುಗಿಸು,
ಉಳಿದ ನರ
ನಾಡಿಗಳೂ ಸೆಟೆದು ನಿಂತಿವೆ.

ನಡಿಗೆ ಕೊನೆಗೊಂಡು
ದಾರಿಯಲ್ಲೊಂದು ನೆಲೆ ಕಂಡು
ಮುಖದ ಹಂಗಿಲ್ಲದೆ ಮಿಂದು
ಚೆಂದದೊಂದು ಸೀರೆಯುಟ್ಟು
ಮಂಡಿ ಮಡಚಿ
ಮುದ್ರೆ ಬಿಗಿದು
ಕುಳಿತಿದ್ದೇನೆ.
ಕಾಲದ ಬಳಿಕ ಇನ್ನೇಕೆ-
ಕಾಲ ಬಳಿ ಬೆಳಕು?.

ಅವನ ನಮ್ರತೆ ನುಡಿಯಿತು-
ನಡೆದು ಬಂದವರ ನಮಿಸಲು,
ಕಾಲ ಕಾಣಿಸುವ ಬೆಳಕು.

Thanks for this pic.ವಿಕ್ರಮ ಹತ್ವಾರhttps://www.blogger.com/profile/12698559194692796084noreply@blogger.comtag:blogger.com,1999:blog-3455566237837454475.post-74129289953741740752007-09-05T12:15:00.000+05:302007-09-05T12:15:00.000+05:30ಬಿಸಿಲಿನ ಜಳವ ಅಡ್ಡ ಹಾಕಿದ ಆ ಸೀರೆಯ ಸೆರಗು ಇಂದು ಬಿಸಿಲಿನಲ...ಬಿಸಿಲಿನ ಜಳವ ಅಡ್ಡ ಹಾಕಿದ
ಆ ಸೀರೆಯ ಸೆರಗು
ಇಂದು ಬಿಸಿಲಿನಲಿ ಒಣಗುತಿರಲು
ಅದನ್ನು ಹೊದ್ದ ನನ್ನಮ್ಮ
ಬಾರದ ಮಗನ ನೆನಪಿನಲಿ
ಬಾಡಿ ಹೋಗಿಹಳು ..Anonymoushttps://www.blogger.com/profile/09411366702351739360noreply@blogger.comtag:blogger.com,1999:blog-3455566237837454475.post-48196674143854852922007-09-05T00:28:00.000+05:302007-09-05T00:28:00.000+05:30ಅವ್ವನ ಮೈತುಂಬಾಕ್ರೂರ ಕಾಲ ಎಳೆದನೇಗಿಲ ಗುರುತುಗಳು!ಅವ್ವನ ಮೈತುಂಬಾ
ಕ್ರೂರ ಕಾಲ ಎಳೆದ
ನೇಗಿಲ ಗುರುತುಗಳು!sritrihttps://www.blogger.com/profile/16777285984452825003noreply@blogger.comtag:blogger.com,1999:blog-3455566237837454475.post-58139733523113270312007-09-04T17:43:00.000+05:302007-09-04T17:43:00.000+05:30ನಾಳೆಯ ಎಳೆ ಬೆಳಕುಹೊರಳಿ ಬಂದು ಮೂಸಿ ಮೈತಿಕ್ಕಿ ಬಾಲವಾಡಿಸುವ...ನಾಳೆಯ ಎಳೆ ಬೆಳಕು
ಹೊರಳಿ ಬಂದು ಮೂಸಿ ಮೈ
ತಿಕ್ಕಿ ಬಾಲವಾಡಿಸುವಾಗ
ಬೇರು ಬಿಳಲು
ಆಳಕ್ಕಿಳಿದ
ಆಲಕ್ಕೆ ಒಳಗೊಳಗೇ ಪುಲಕ.ಅನಿವಾಸಿhttps://www.blogger.com/profile/00868437002180800516noreply@blogger.com