tag:blogger.com,1999:blog-3455566237837454475.post6202345836735561129..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ ೮೮Shreehttp://www.blogger.com/profile/11541927845221428283noreply@blogger.comBlogger1125tag:blogger.com,1999:blog-3455566237837454475.post-76466852103836446392009-01-26T13:01:00.000+05:302009-01-26T13:01:00.000+05:30ಮೋಜಿನ ವಸ್ತುಗೇರ್ ಗೇರ್ ಮಂಗಣ್ಣಕಡ್ಲೆಕಾಯ್ ತಿನ್ನಣ್ಣಕೈ ಮೈ...ಮೋಜಿನ ವಸ್ತು

ಗೇರ್ ಗೇರ್ ಮಂಗಣ್ಣ
ಕಡ್ಲೆಕಾಯ್ ತಿನ್ನಣ್ಣ
ಕೈ ಮೈ ಕೆರ್ಕೊಳಣ್ಣ
ನಿನ್ನ ನೋಡಿ ನಾ ನಗೋಣ

ಹಿಂದೆ ಹೇಳ್ತಿದ್ರು
ಮಂಗನ ಆಟ ನೋಡಲು ಚಂದ
ಅದನ ನೋಡಲೆಂದೇ ನೀ ತಾ ಬಂದ
ಹಾದಿ ಬೀದಿಯಲೂ ಮಂಗನ ನೋಡುತ ನಿಂದ

ಈಗೆಲ್ಲಿ ಮಂಗ
ಮಂಗ ಮಾಯ - ಬದಲಿಗೆ
ಎಲ್ಲೆಲ್ಲಿ ನೋಡಲೂ ಕಾಣುವಿರಿ
ಜೋಡಿ ಮಂಗ

ಕಂಬಿಯ ಮೇಲೆ ಕುಳಿತಿಹೆ ನಾನಿಲ್ಲಿ
ಕಲ್ಲು ಹಾಸಿನ ಮೇಲೆ ಜೋಡಿ ಎದುರಲ್ಲಿ
ನಾ ಮಾಡುತಿಹ ಚೇಷ್ಟೆ ಈಗೆಲ್ಲಿ
ಅದನೆಲ್ಲ ಅಭ್ಯಸಿಸುತಿಹರು ಅವರಲ್ಲಿ

ಮಂಗನೆದುರು ನೋಡಿ ಜೋಡಿ ಮಂಗ
ಲಾಲ್ ಬಾಗ್ ಕೆರೆ ಏರಿಯ ಮೇಲೆ
ಮರದ ಕೆಳಗೆ ತಣ್ಣನೆಯ ನೆರಳಲ್ಲಿ
ಅವರನೇ ನೋಡಲು ಪೋಲೀ ರಂಗ

ಸಂಜೆಯ ಇಳಿಗೆಂಪಿಗೆ
ಮೈ ಕಾಯುಸುತಿಹೆ
ರಾತ್ರಿಯ ತಂಪು ತಡೆಯಲು
ಶಕ್ತಿ ಶೇಖರಿಸುತಿಹೆ

ಜನಗಳೆಲ್ಲ ಬರುತಿಹರಿಲ್ಲಿ
ತೋಟವ ನೋಡಲಲ್ಲ
ಎನ್ನ ನೋಡುವ ತವಕವಂತೂ ಇಲ್ಲ
ನಿಸರ್ಗವ ಸವಿಯಲಂತೂ ಅಲ್ಲವೇ ಅಲ್ಲ
ಈ ಜೋಡಿಗಳ ಲಲ್ಲೆ ಸರಸ ಸಲ್ಲಾಪ ನೋಡಲು
ತಿನಿಸಿಲ್ಲದೇ ಬಾಯಿ ಚಪ್ಪರಿಸಲು

ಈಗ ಹೇಳಿ
ಮೋಜಿನ ವಸ್ತು - ಚಿತ್ರದಲಿ ಕಾಣಿಸುತಿಹ ಮಂಗವೋ ಅಥವಾ ಮರೆಯಲಿರುವ ಆ ಜೋಡಿಯೋ! :PUnknownhttps://www.blogger.com/profile/12979926923499993369noreply@blogger.com