tag:blogger.com,1999:blog-3455566237837454475.post2769084765089349079..comments2023-09-18T16:32:05.644+05:30Comments on ಚಿತ್ರಕವನ: ಚಿತ್ರ - ೨೪Shreehttp://www.blogger.com/profile/11541927845221428283noreply@blogger.comBlogger3125tag:blogger.com,1999:blog-3455566237837454475.post-42278376966529730132007-10-26T19:35:00.000+05:302007-10-26T19:35:00.000+05:30ಬೇಡುವುದಾದರೂ ಏಕೆ?ಒಳಗಿರುವ ದೇವನ ನೋಡಲು ಕಣ್ಣ ಮುಚ್ಚಬೇಕೇಕ...ಬೇಡುವುದಾದರೂ ಏಕೆ?

ಒಳಗಿರುವ ದೇವನ ನೋಡಲು ಕಣ್ಣ ಮುಚ್ಚಬೇಕೇಕೆ
ಬೇಕಿರುವ ವರವ ಬೇಡಲು ಕೈಯ ಜೋಡಿಸಬೇಕೇಕೆ

ಎಂದೋ ತೋರಿಸಿ ಯಾರೋ ಹೇಳಿಕೊಟ್ಟ ಮಾತ್ರಕ್ಕೆ
ಬಡವ-ಬಲ್ಲಿದರ ಒಡಲೊಳಗಿನ ಆಕ್ರಂದನದ ಸೂತ್ರಕ್ಕೆ
ಒಂದೇ ವಾರಿಗೆಯವರೆಲ್ಲ ಬೇಡಿಕೆಯನೆಂದು ನಿಲ್ಲಿಸುವೆವು
ಅನುದಿನವೂ ನಮ್ಮಯ ಪ್ರಾರ್ಥನೆಯೇಕೆ ಸಲ್ಲಿಸುವೆವು.

ಎಲ್ಲಾ ಕಡೆಗೂ ಇರುವ ದೇವರನು ಬೇಡುವುದಾದರೂ ಏಕೆ
ಸೃಷ್ಟಿಯು ತೋರಿಸೋ ಆಟದ ಜೊತೆಗೆ ಬೇರೆಯ ಪಾಠ ಬೇಕೆ
ಯಾರೂ ಕಾಣದ ದೇವನ ಕುರಿತು ಏತಕೆ ನಮಗೆ ಮೋಹ
ಎಷ್ಟೇ ಬೇಡಿ ಎಲ್ಲೇ ಹೋದರು ಹಿಂಗದು ತೀರದ ದಾಹ.

ವರವನು ಪಡೆಯಲು ಮೌನದ ಮೊರೆಯನು ಹೊಕ್ಕೆವು ನಾವು
ತಿರುತಿರುವಲ್ಲು ರೋಚಕವೆನಿಸುವ ಬದುಕದು ದೊಡ್ಡ ತಾವು
ನಾವೂ ನೀವೂ ಕಲಿಯುವ ಪಾಠ ಎಂದಿಗೂ ಎಲ್ಲೂ ನಿಲ್ಲೋಲ್ಲ
ಸವಾಲನು ಎಸೆವ ತಂತ್ರದ ಎದಿರು ನಮ್ಮಯ ಆಟ ನಡೆಯೋಲ್ಲ.Satishhttps://www.blogger.com/profile/18348145837047496415noreply@blogger.comtag:blogger.com,1999:blog-3455566237837454475.post-48038776959294297402007-10-25T15:01:00.000+05:302007-10-25T15:01:00.000+05:30ಪ್ರೀತಿಯೇ ದೇವರೆಂದವನ ನೆನೆದು..-----------------------...ಪ್ರೀತಿಯೇ ದೇವರೆಂದವನ ನೆನೆದು..

ಗುಣವಿರುವ ಮಕ್ಕಳೆಲ್ಲರ ಪ್ರಾರ್ಥನೆ
ಎಲ್ಲಿಯೂ ಇರಬಹುದಾದ ಗುಡಿಯ ದೇವಗೆ.

ಪ್ರಾರ್ಥಿಸಲು ಕೇಳಿಕೊಂಡವರಾರೋ,
ಅವರ ಅಹವಾಲೇನಿದೆಯೋ
ಇವರು ಮಾತ್ರ..
ತೆರೆದುಕೊಂಡು ಜಗವ ನೋಡಲು ಹಟ ಮಾಡುವ
ಕಣ್ಣು ಮುಚ್ಚಿ
ಕೈಮುಗಿದು..
ಒಂದು ಕ್ಷಣ ಹಿಂಚುಮುಂಚಾದರೆ
ಪ್ರಾರ್ಥಿಸುವವರೇ ದೇವರಾಗಿಬಿಡಬಹುದು..!

ಕಣ್ಣು ಮುಚ್ಚಿ
ಕೈ ಮುಗಿದರೆ
ಸಿಕ್ಕೇ ಸಿಗಬಹುದೆಂಬ
ನಿಮ್ಮ ನಂಬಿಕೆಯ ಪಂಚಾಮೃತ
ನನಗೂ ಬೇಕಲ್ಲ ಕಿನ್ನರ ಜೀವಗಳೇ

ಹಿರಿಯರ ಜಗತ್ತಿನ ತರ್ಕಸಮುದ್ರದ
ಮೊಣಕಾಲುದ್ದ ನೀರಿನಲ್ಲಿ
ನಿಮ್ಮ ಹೊಳೆಗೆ ಸೇರುವ
ಹಿನ್ನೀರ ಮೆಟ್ಟಲು ಹುಡುಕುತ್ತಿರುವೆ
ಸಿಗಬಹುದೇ?!ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-3455566237837454475.post-2609616551624057152007-10-22T23:21:00.000+05:302007-10-22T23:21:00.000+05:30ಪ್ರಾರ್ಥನೆಕನವರಿಸದ ನೆನಪಿಲ್ಲದಮುಗ್ಧ ಖಾಲಿ ಕಣ್ಣುಗಳುಮುಚ್ಚ...ಪ್ರಾರ್ಥನೆ

ಕನವರಿಸದ ನೆನಪಿಲ್ಲದ
ಮುಗ್ಧ ಖಾಲಿ ಕಣ್ಣುಗಳು
ಮುಚ್ಚಿ ಪ್ರಾರ್ಥಿಸಿದರೆ ಒಳಗಡೆ ಇನ್ನೇನೋ!

ತುಂಬುವಾ ಮನಸ್ಸು ಹಾಡುತ್ತಿದೆ ಮತ್ತೇನೋ
ಬಾಯಲ್ಲಿ ಗುನುಗುನು ಸದ್ದು
ಬಾಲಿಶದ ಕಣ್ಣು
ಒಂದಿಷ್ಟು ಕಲ್ಪನಾರಹಿತ ವಾಸ್ತವ
ಮತ್ತೊಂದಿಷ್ಟು ಮಾತ್ರ ಖಾಲಿ ಖಾಲಿ
ಜೊತೆ ಒಂದಿಷ್ಟು ರೆಡಿಮೇಡ್ ಖುಷಿ!
ಪ್ರಾರ್ಥಿಸುವ ಕೆಲಸಕ್ಕೆ ಮನಸಿಲ್ಲ,
ಜಾರುಬಂಡಿಯು ಅಲ್ಲಿ ಕಾಯುತ್ತಿದೆ
ಇಲ್ಲಿ ಮೈಮನಸು ಕಟ್ಟಿ ಗಟ್ಟಿಆಗಿ ಎಲ್ಲೆಲೂ ಕತ್ತಲು
ಬಿಡು ಎಂದಾಗ ಮತ್ತದೇ ಬೆಳಕು
ಹುಳಿಮಾವು ಕೊಯ್ದು ತಿಂದಷ್ಟು ಖುಷಿ

ಕಣ್ಮುಚ್ಚಿ ಕನಸುಂಡು, ನೆನಪಿಸಿ, ಪ್ರಾರ್ಥಿಸಿ
ಅಳುವ ಕೆಲಸ ಯೌವನದಿ ಕಟ್ಟಿಟ್ಟ ಬುತ್ತಿ.
ನಮ್ಮೀ ಬಾಲ್ಯಕ್ಕಿದು ಬರಿ ಶಿಸ್ತು ಅನಿಸದಾ?
ಮಾಸ್ತರೇ ಕಣ್ಣು ಬಿಡಲಾ ಒಂದುಸಲ?ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com