ಚಿತ್ರ - ೨೧
' ಹಳದಿ ಹಾಸು ' ಎನ್ನುವ ಕವನದ ಮೂಲಕ ಸತೀಶ ತಮ್ಮ ಎಂದಿನ ಮನೋಜ್ಞವಾದ ಶೈಲಿಯಲ್ಲಿ ಬರೆದಿದ್ದು ಹೀಗೆ :
ಜಗಕೆ ಬಿಳಿಯ ಬಣ್ಣವ ಹೊಮ್ಮಿಸುವ ಬಾನಿಗೆ
ತಿಳಿ ಹಳದಿ ಹೊದಿಸುವ ಹುಚ್ಚು ನಿನಗೇಕೆ
ತನ್ನೊಳಗೆ ಇಹವನ್ನೇ ಮುಚ್ಚಿಕೊಳುವ ಗೂಡಿಗೆ
ಕೆಳಗಿನವರು ನೋಡದ ಹಾಗೆ ಮಾಡುವೆ ಏಕೆ.
ನಿನ್ನೊಳಗಿನಾಸೆ ಆಂತರ್ಯಗಳು ಹೊಮ್ಮುವುದಕೆ
ಇದ್ದಿರಬಹುದು ಜೊತೆಯಾಗಿ ಪೀನ ಬಣ್ಣ
ನಿನ್ನಾಸೆ ಅಮಲುಗಳು ಹುಚ್ಚೆದ್ದು ಕುಣಿವುದಕೆ
ಮೈ ಮರೆಸುವುದೇಕೆ ಜನರ ಕಣ್ಣ.
ಸೂರ್ಯ ಪ್ರಭೆ ಜಗಕೆಲ್ಲ ಹಂಚುತಿಹ ಕಾಲದಲಿ
ಹಳದಿಯ ಹೊರತು ನೀನೇಕೆ ಎಲ್ಲವನು ಹೀರಿಕೊಳುವೆ
ಮನ ಬಂದಂತೆ ಹರಡಿ ಬಿಡುಬೀಸಾದ ನಭದಲ್ಲಿ
ನಿನ್ನ ಸತ್ಯವನು ನೀನೇ ಏಕೆ ಮಾರಿಕೊಳುವೆ.
ತೆರೆದಿರುವ ಅಂಗಳಕೆ ಹೊಚ್ಚಿಹುದು ಸಾಕು ಹಳದಿ ಹಾಸು
ಸಂಭ್ರಮದ ಒಳಗಿನ ತುಮುಲಗಳ ತೆರೆದು ನಗೆಯ ಸೂಸು.
ಸೀಮಾ ಹೇಮಂತ ಋತುವಿನ ಬಗ್ಗೆ ಬರೆದಿದ್ದು ಹೀಗೆ :
ಮರಯವಿರೇಕೆ ಹೇಮಂತನ?
ಹೇಮಂತ ಓಕುಳಿಯಾಡಿದ್ದಾನೆ ತಂದು ಬಣ್ಣ;
ಬಾನಿಗೆಲ್ಲ ಮೆತ್ತಿದ್ದಾನೆ ಅರಿಶಿಣ.
ಎಲ್ಲಾ ಋತುಗಳೂ ಹೊಂದಿವೆ ಚಂದದ ಬಣ್ಣ;
ತೆರೆದು ನೋಡಬೇಕು ಮನದ ಕಣ್ಣ.
ಜೀವನದಿ ಪ್ರತಿಯೊಂದು ಕ್ಷಣವೂ ತಂದು ಅದರದೇ ಬಣ್ಣ;
ಅರಳಿಸುವಂತೆ ಮಾಡುತ್ತದೆ ಕಣ್ಣ.
ವಸಂತ ಹಸಿರಾದರೆ, ಹೇಮಂತ ಉಸಿರಾದಾನು,
ಹಾರೈಸುವಿರೇಕೆ ಕೇವಲ ವಸಂತನ?
ಮರೆಯದಿರಿ ಸ್ವಾಗತಿಸಲು ಹೇಮಂತನ.
ಸಿಂಧು ‘ ಹೂವ ಚೆಲ್ಯಾರೆ ಬಾನಿಗೆ?! ‘ ಎನ್ನುವ ಕವನದಲ್ಲಿ ನಮ್ಮೆದುರಿಗೆ ಚಿತ್ರವನ್ನು ಬಣ್ಣಿಸಿದ್ದು ಹೀಗೆ :
ಕಣ್ಣೆತ್ತಿ ನೋಡಿದಾಗ
ಕಂಡಿದ್ದರೆ ಹೀಗೊಂದು ಹೂಚೆಲ್ಲಿದ ಆಕಾಶ,
ನಮ್ಮ ನೋಟದ ಮೊನಚಷ್ಟು ಕಡಿಮೆಯಾಗುತ್ತಿತ್ತೇನೋ?
ಯಾರಿಗೆ ಗೊತ್ತು
ಎಲ್ಲಿ ಹೂಬಿರಿದ ಮರ ಕಂಡರೂ
ನೆನಪಾಗುತ್ತದೆ
ಬಾಲ್ಯದ ಹಸಿರುಗುಡ್ಡದಲ್ಲಿ
ಹೂವರಳಿ ನಿಂತ ದೇವಕಣಗಿಲು,
ಶಾಲೆಯ ದಾರಿಯ ರಂಜಲು
ಅವನು ಕಾದು ನಿಂತಿರುತ್ತಿದ್ದ,
ಆಕಾಶಮಲ್ಲಿಗೆಯ ಮರದಿಂದ ಬಾಗಿದ
ಹೂ ಗೊಂಚಲು ಗೊಂಚಲು..
ಮತ್ತು
ಹೂವಿನ ಕಂಪನ್ನ ಬದುಕಿನ ತಂಪನ್ನ
ಜೋಡಿಸಿ ನೇಯ್ದ ಕೆ.ಎಸ್.ನ ಕವಿತೆಯ ಸಾಲುಗಳು..
ಮನಸ್ವಿನಿಯವರು ಈ ಕೆಳಗಿನಂತೆ ಹೇಳಿದ್ದಾರೆ :
ಹೂಮಳೆ
**************
ಯಾರಿಟ್ಟಿಹರು ಹಳದಿ ಗೊಂಚಲ
ಮೋಡಗಳಾಗಿ?
ಭುವಿಗೆ ಚಪ್ಪರವಾಗಿ
ಸುರಿದೀತೆ ಹೇಮ ಮೇಘ!
ಹೂಮಳೆಯಾಗಿ
ನನಗಾಗಿ, ನಿನಗಾಗಿ
ಮತ್ತೆ ಧಾರಿಣಿಗಾಗಿ
ಮೈ ಮನಗಳ ತಣಿಸೀತೆ!
ಗಗನ ಕುಸುಮ ಬಿರಿದು, ಸುರಿದು
ಮನದಂಗಳಗಳ ತಣಿಸೀತೆ!
ಹೂಮಳೆಯಾಗಿ
5 comments:
ಹಳದಿ ಹಾಸು
ಜಗಕೆ ಬಿಳಿಯ ಬಣ್ಣವ ಹೊಮ್ಮಿಸುವ ಬಾನಿಗೆ
ತಿಳಿ ಹಳದಿ ಹೊದಿಸುವ ಹುಚ್ಚು ನಿನಗೇಕೆ
ತನ್ನೊಳಗೆ ಇಹವನ್ನೇ ಮುಚ್ಚಿಕೊಳುವ ಗೂಡಿಗೆ
ಕೆಳಗಿನವರು ನೋಡದ ಹಾಗೆ ಮಾಡುವೆ ಏಕೆ.
ನಿನ್ನೊಳಗಿನಾಸೆ ಆಂತರ್ಯಗಳು ಹೊಮ್ಮುವುದಕೆ
ಇದ್ದಿರಬಹುದು ಜೊತೆಯಾಗಿ ಪೀನ ಬಣ್ಣ
ನಿನ್ನಾಸೆ ಅಮಲುಗಳು ಹುಚ್ಚೆದ್ದು ಕುಣಿವುದಕೆ
ಮೈ ಮರೆಸುವುದೇಕೆ ಜನರ ಕಣ್ಣ.
ಸೂರ್ಯ ಪ್ರಭೆ ಜಗಕೆಲ್ಲ ಹಂಚುತಿಹ ಕಾಲದಲಿ
ಹಳದಿಯ ಹೊರತು ನೀನೇಕೆ ಎಲ್ಲವನು ಹೀರಿಕೊಳುವೆ
ಮನ ಬಂದಂತೆ ಹರಡಿ ಬಿಡುಬೀಸಾದ ನಭದಲ್ಲಿ
ನಿನ್ನ ಸತ್ಯವನು ನೀನೇ ಏಕೆ ಮಾರಿಕೊಳುವೆ.
ತೆರೆದಿರುವ ಅಂಗಳಕೆ ಹೊಚ್ಚಿಹುದು ಸಾಕು ಹಳದಿ ಹಾಸು
ಸಂಭ್ರಮದ ಒಳಗಿನ ತುಮುಲಗಳ ತೆರೆದು ನಗೆಯ ಸೂಸು.
ಮರಯವಿರೇಕೆ ಹೇಮಂತನ?
ಹೇಮಂತ ಓಕುಳಿಯಾಡಿದ್ದಾನೆ ತಂದು ಬಣ್ಣ;
ಬಾನಿಗೆಲ್ಲ ಮೆತ್ತಿದ್ದಾನೆ ಅರಿಶಿಣ.
ಎಲ್ಲಾ ಋತುಗಳೂ ಹೊಂದಿವೆ ಚಂದದ ಬಣ್ಣ;
ತೆರೆದು ನೋಡಬೇಕು ಮನದ ಕಣ್ಣ.
ಜೀವನದಿ ಪ್ರತಿಯೊಂದು ಕ್ಷಣವೂ ತಂದು ಅದರದೇ ಬಣ್ಣ;
ಅರಳಿಸುವಂತೆ ಮಾಡುತ್ತದೆ ಕಣ್ಣ.
ವಸಂತ ಹಸಿರಾದರೆ, ಹೇಮಂತ ಉಸಿರಾದಾನು,
ಹಾರೈಸುವಿರೇಕೆ ಕೇವಲ ವಸಂತನ?
ಮರೆಯದಿರಿ ಸ್ವಾಗತಿಸಲು ಹೇಮಂತನ.
ಹೂವ ಚೆಲ್ಯಾರೆ ಬಾನಿಗೆ?!
ಕಣ್ಣೆತ್ತಿ ನೋಡಿದಾಗ
ಕಂಡಿದ್ದರೆ ಹೀಗೊಂದು ಹೂಚೆಲ್ಲಿದ ಆಕಾಶ,
ನಮ್ಮ ನೋಟದ ಮೊನಚಷ್ಟು ಕಡಿಮೆಯಾಗುತ್ತಿತ್ತೇನೋ?
ಯಾರಿಗೆ ಗೊತ್ತು
ಎಲ್ಲಿ ಹೂಬಿರಿದ ಮರ ಕಂಡರೂ
ನೆನಪಾಗುತ್ತದೆ
ಬಾಲ್ಯದ ಹಸಿರುಗುಡ್ಡದಲ್ಲಿ
ಹೂವರಳಿ ನಿಂತ ದೇವಕಣಗಿಲು,
ಶಾಲೆಯ ದಾರಿಯ ರಂಜಲು
ಅವನು ಕಾದು ನಿಂತಿರುತ್ತಿದ್ದ,
ಆಕಾಶಮಲ್ಲಿಗೆಯ ಮರದಿಂದ ಬಾಗಿದ
ಹೂ ಗೊಂಚಲು ಗೊಂಚಲು..
ಮತ್ತು
ಹೂವಿನ ಕಂಪನ್ನ ಬದುಕಿನ ತಂಪನ್ನ
ಜೋಡಿಸಿ ನೇಯ್ದ ಕೆ.ಎಸ್.ನ ಕವಿತೆಯ ಸಾಲುಗಳು..
ಹೂಮಳೆ
**************
ಯಾರಿಟ್ಟಿಹರು ಹಳದಿ ಗೊಂಚಲ
ಮೋಡಗಳಾಗಿ?
ಭುವಿಗೆ ಚಪ್ಪರವಾಗಿ
ಸುರಿದೀತೆ ಹೇಮ ಮೇಘ!
ಹೂಮಳೆಯಾಗಿ
ನನಗಾಗಿ, ನಿನಗಾಗಿ
ಮತ್ತೆ ಧಾರಿಣಿಗಾಗಿ
ಮೈ ಮನಗಳ ತಣಿಸೀತೆ!
ಗಗನ ಕುಸುಮ ಬಿರಿದು, ಸುರಿದು
ಮನದಂಗಳಗಳ ತಣಿಸೀತೆ!
ಹೂಮಳೆಯಾಗಿ
ಅಳ್ದಿ- ಕಪ್ಪಿನ್ ಚಿತ್ತಾರ್ದಾಗೆ, ಮುಗಿಲೇ ಕಾಣ್ದಂಗಾಯ್ತಲ್ಲೊ ತಮ್ಮ, ನೆಲ ಎಲ್ಲೈತೆ, ಬಾನೆಲ್ಲಿ, ಆ ಸುಂದ್ರ ಚಿಟ್ಟೆಗ್ಳು, ಅಕ್ಕಿ ಪಕ್ಸಿಗ್ಳು, ಒತಿಕ್ಯಾತ, ಮಂಗಣ್ಣ, ಇರ್ವೆ, ಎವೆಲ್ಲ ಎಲ್ಲೊ ಮಾರಾಯ ? ಒಸಿ ನಿದಾನ್ವಾಗಿ ಕೆಲ್ಸ್ ಮಾಡ್ಪ.
ಬರಿ, ಕಪ್ಪೇ ಕಾಣ್ತದೆ ; ಅದರ್ ಮದ್ಯೆ, ಅಲ್ಲೊ ಇಲ್ಲೊ, ಅಳ್ದಿ ಬಣ್ಣ ನೋಡಿದ್ರೆ, ಆ ನೀಲಿ ಆಕಾಸ್ ಎಲ್ಲೊಂಟೋಯ್ತಪ್ಪ ಅಂತ, ಎದರ್ಕೆ ಆಗೀತೆ ಕಣ್ಮಗ !
ಈ ಮೂಡ್ಮತಿ ಅಜ್ಜನ್, ಮಾತ್ನ ಅಂಗೇ ಕೇಳಕಂಡು ಇನ್ನೊಂದ್ ಕಿವಿನಾಗೆ ಬಿಟ್ಬಿಡು. ಸರಿಯೇನ್ಪ.
ಬರ್ಲ. ದ್ಯಾವ್ರು ನಮ್ ಕರ್ನಾಟ್ಕನ ತಣ್ಗಿಟ್ಟಿರ್ಲಿ.
Post a Comment