Wednesday, 22 April 2009

ಚಿತ್ರ ೧೦೧



ಚಿತ್ರಕವನದ ನೂರರ ಗಡಿಯನ್ನ ದಾಟುತ್ತ ನಮ್ಮೊಂದಿಗಿರುವ ಎಲ್ಲ ಸಾಹಿತ್ಯಾಸಕ್ತರಿಗೂ ಅನಂತ ವಂದನೆಗಳು. "ಚಿತ್ರಕವನ" ಹೆಸರು ಸೂಚಿಸುವಂತೆ ಕೇವಲ ಕವನ ಪ್ರಕಾರಕ್ಕೆ ಸೀಮಿತವಾಗಿರದೆ, "ಚಿತ್ರ" ನಿಮ್ಮಲ್ಲಿ ಮೂಡಿಸುವ ಭಾವನೆಗಳ ಬರಹ ಕೂಡ ಆಗಿರಬಹುದು. ಇಲ್ಲಿಯವರೆಗೆ ಹೆಚ್ಚಿನ ಆಸಕ್ತರು ಕವನ ಪ್ರಕಾರವನ್ನೆ ಬರೆದಿದ್ದಾರೆ ಮುಂದೆ ವಿಭಿನ್ನ ಪ್ರತಿಕ್ರಿಯೆಗಳು ಮೂಡಿಬರಲಿ ನಿಮ್ಮಿಂದ ಎಂದು ಆಶಿಸುತ್ತ.

ವಂದನೆಗಳು
ಚಿತ್ರಕವನ ಬಳಗ

...

ತವಿಶ್ರೀ:

ದೇಶದ ನಾಡಿ
ಸುಗ್ಗಿ ಬಂತೋ ಅಣ್ಣ ಸುಗ್ಗಿ
ನಮ್ಮೆಲ್ಲರ ಹೃದಯ ಹಿಗ್ಗಿ ಹಿಗ್ಗಿ
ಮನೆ ಅಂಗಳದಲಿ ತುಂಬುವುದು ಕಾಳು
ಎಲ್ಲರಿಗೂ ಸಿಗುವುದು ಕೂಳು

ಮಾರಣ್ಣ ಸಿಂಗಣ್ಣ
ಕೊಯ್ಲು ಕೊಯುವರು ಹೊಲದಲಿ
ಮೂಟೆ ಮೂಟೆ ರಾಗಿ ಭತ್ತ
ಸುರಿವರು ಮಾಳದಲಿ

ಸಾಕವ್ವ ಮಾರವ್ವ
ಬನ್ನೀರೆ ಜೊಳ್ಳನು ತೂರೂವಾ
ಜೊಳ್ಳ ತೂರಿ
ಕಾಳನು ಕೇರೂವಾ

ಕಾಳಲೇ ಕೂಳು
ಕೂಳಲೇ ಬಾಳು
ಎಲ್ಲ ಸೇರಿ ದುಡಿಯುವಾ
ದೇಶದ ನಾಡಿಯ ಮಿಡಿಯುವಾ


2 comments:

sunaath said...

ನಿಮ್ಮ ಚಿತ್ರಗಳಿಗೆ ಕವನವನ್ನಾಗಲೀ ಅಥವಾ ಭಾವನೆಯನ್ನಾಗಲೀ ನಾನು ಬರೆದು ತಿಳಿಸಿಲ್ಲ. ಆದರೆ, ಅವು ನನ್ನನ್ನು ಆಕರ್ಷಿಸಿವೆ ಎಂದಷ್ಟೇ ಹೇಳಬಯಸುತ್ತೇನೆ. ಶತಕ ಬಾರಿಸಿದ ನಿಮಗೆ ಅಭಿನಂದನೆಗಳು.

Unknown said...

ದೇಶದ ನಾಡಿಸುಗ್ಗಿ ಬಂತೋ ಅಣ್ಣ ಸುಗ್ಗಿ
ನಮ್ಮೆಲ್ಲರ ಹೃದಯ ಹಿಗ್ಗಿ ಹಿಗ್ಗಿ
ಮನೆ ಅಂಗಳದಲಿ ತುಂಬುವುದು ಕಾಳು
ಎಲ್ಲರಿಗೂ ಸಿಗುವುದು ಕೂಳು

ಮಾರಣ್ಣ ಸಿಂಗಣ್ಣ
ಕೊಯ್ಲು ಕೊಯುವರು ಹೊಲದಲಿ
ಮೂಟೆ ಮೂಟೆ ರಾಗಿ ಭತ್ತ
ಸುರಿವರು ಮಾಳದಲಿ

ಸಾಕವ್ವ ಮಾರವ್ವ
ಬನ್ನೀರೆ ಜೊಳ್ಳನು ತೂರೂವಾ
ಜೊಳ್ಳ ತೂರಿ
ಕಾಳನು ಕೇರೂವಾ

ಕಾಳಲೇ ಕೂಳು
ಕೂಳಲೇ ಬಾಳು
ಎಲ್ಲ ಸೇರಿ ದುಡಿಯುವಾ
ದೇಶದ ನಾಡಿಯ ಮಿಡಿಯುವಾ