ಕಣ್ಣೆದುರಲ್ಲಿ ಕಾಣುವುದನ್ನು ತನ್ನ ದೃಷ್ಟಿಗನ್ವಯವಾಗಿ ಸೆರೆಹಿಡಿಯುವುದು ಒಬ್ಬ ಕಲಾಕಾರನ ಸ್ವಾತಂತ್ರ್ಯ. ಆ ಚಿತ್ರದಲ್ಲಿ ನೂರು ಕಥೆಗಳು, ಕವಿತೆಗಳು ಅಡಗಿರಬಹುದು... ಚಿತ್ರ ಸೆರೆ ಹಿಡಿದವರು ಕಾಣದ ಇನ್ನೊಂದು ನೋಟವಿರಬಹುದು... ಈ ರೀತಿಯ ವಿವಿಧ ನೋಟಗಳತ್ತ ಒಂದು ನೋಟ - ಈ ಪುಟ್ಟ ಪ್ರಯತ್ನ.
ವಾರಕ್ಕೊಂದು ಚಿತ್ರ - ಪೈಂಟಿಂಗ್ ಇರಬಹುದು, ಫೋಟೋ ಇರಬಹುದು, ಇಲ್ಲಿ ನೋಡುಗರ ದಾರಿ ಕಾಯುತ್ತಿರುತ್ತದೆ... ಅದಕ್ಕೆ ಕವನ, ಬರಹ, ನೋಟ -ಯಾರು ಬೇಕಾದರೂ ಬರೆಯಬಹುದು...
ನಮ್ಮೊಳಗು-ಹೊರಗಿಗೆ ಕನ್ನಡಿಯಾಗುವ, ಸೃಜನಶೀಲತೆಯ ವಿವಿಧ ಆಯಾಮಗಳನ್ನರಸುತ್ತ ಸಾಗುವ ಈ ಪಯಣಕ್ಕೆ ಜತೆಯಾಗಿ... ನಿಮ್ಮ ಹೆಜ್ಜೆಗಳನ್ನು ಜೋಡಿಸಿ...
2 comments:
ಅಬ್ಬಾ! ಇದೇನು ಫೋಟೋನೋ ಅಥವಾ ಪೇಂಟಿಂಗೋ?
ನೀವಿದನ್ನು art galleryಯಲ್ಲಿ painting ಎಂದು ಹಾಕಿ, ಬಹುಮಾನ ಪಡೆಯಬಹುದು. ಅಷ್ಟು ಸುಂದರವಾಗಿದೆ
ಕುಳಿತಲ್ಲೇ ನಿದ್ರೆ
ಸೊಂಪಾದ ನಿದ್ರೆ
ಹಗಲುಗನಸು ಕಾಣುವಂತಹ ನಿದ್ರೆ
ಆಯಾಸ ತಣಿಸುವ ನಿದ್ರೆ
ಆಲದ ಮನೆಯಲಿ ಸವಿ ನಿದ್ರೆ
ಸಿಹಿ ಕಹಿಯ ಅರಿವಾಗದಿದ್ರೆ
ಮರಳಿ ಚೈತನ್ಯ ಮೂಡಿಸುವ ಮುದ್ರೆ
ಜೀವನದಲಿ ಮೂಡುವುದಿಲ್ಲ ತೊಂದ್ರೆ
PS:
ಕೆಲಸದ ಆಯಾಸದಲಿ ಹೆಚ್ಚು ಬರೆಯಲಾಗುತ್ತಿಲ್ಲ
ಸದ್ಯದಲ್ಲಿಯೇ ಮುಕ್ತ ಅವಕಾಶಕ್ಕಾಗಿ ಕಾಯುತ್ತಿರುವ
Post a Comment