ಕಣ್ಣೆದುರಲ್ಲಿ ಕಾಣುವುದನ್ನು ತನ್ನ ದೃಷ್ಟಿಗನ್ವಯವಾಗಿ ಸೆರೆಹಿಡಿಯುವುದು ಒಬ್ಬ ಕಲಾಕಾರನ ಸ್ವಾತಂತ್ರ್ಯ. ಆ ಚಿತ್ರದಲ್ಲಿ ನೂರು ಕಥೆಗಳು, ಕವಿತೆಗಳು ಅಡಗಿರಬಹುದು... ಚಿತ್ರ ಸೆರೆ ಹಿಡಿದವರು ಕಾಣದ ಇನ್ನೊಂದು ನೋಟವಿರಬಹುದು... ಈ ರೀತಿಯ ವಿವಿಧ ನೋಟಗಳತ್ತ ಒಂದು ನೋಟ - ಈ ಪುಟ್ಟ ಪ್ರಯತ್ನ.
ವಾರಕ್ಕೊಂದು ಚಿತ್ರ - ಪೈಂಟಿಂಗ್ ಇರಬಹುದು, ಫೋಟೋ ಇರಬಹುದು, ಇಲ್ಲಿ ನೋಡುಗರ ದಾರಿ ಕಾಯುತ್ತಿರುತ್ತದೆ... ಅದಕ್ಕೆ ಕವನ, ಬರಹ, ನೋಟ -ಯಾರು ಬೇಕಾದರೂ ಬರೆಯಬಹುದು...
ನಮ್ಮೊಳಗು-ಹೊರಗಿಗೆ ಕನ್ನಡಿಯಾಗುವ, ಸೃಜನಶೀಲತೆಯ ವಿವಿಧ ಆಯಾಮಗಳನ್ನರಸುತ್ತ ಸಾಗುವ ಈ ಪಯಣಕ್ಕೆ ಜತೆಯಾಗಿ... ನಿಮ್ಮ ಹೆಜ್ಜೆಗಳನ್ನು ಜೋಡಿಸಿ...
1 comment:
ಗಿರಿಯ ತುದಿಯ ಸಿರಿಯ ಪಡೆಯೆ
ಎದೆಗೆ ಹರುಷ ಚಿತ್ತ ಶಾಂತ |
ತಾಯ ಮಡಿಲೊಳು ತಾಯೆ ಆಗಿ
ಮುದದಿ ಹಕ್ಕಿಯಂತೆ ನಮ್ಮ
ಪ್ರಕೃತಿ ಪ್ರೇಮಿ ಶ್ರೀಕಾಂತ ||
-ಅ
07.09.2009
8.30PM
Post a Comment