Thursday, 23 July 2009

ಚಿತ್ರ ೧೧೨



ತವಿಶ್ರೀ :

ಎತ್ತ ನೋಡಿದರತ್ತ ಹಸುರು
ಕಾನನ ಸಿರಿಯ ವೈಭವ
ಮೇಲೆ ತಣ್ಣನೆ ಮೋಡದ ಹೊದಿಕೆ
ಕೆಳಗೆ ಕುಳಿರ್ಚಳಿಯ ಹಾಸುಗೆ

ಎಲ್ಲೂ ಬಿತ್ತಿರದ ಬೆಳೆ
ಎಲ್ಲೆಲ್ಲೂ ಬೆಳೆದಿಹ ಕಳೆ
ಆ ನೆಲಕೆ ಬೇಕಿಹುದೀ ಮಳೆ
ಎಲ್ಯಾರಿಗೂ ಬೇಡದ ಮಳೆ

ಹನಿ ಹಾಕುತಿಹ ಜಟಿಪಿಟಿ ತಾಳ
ಹೊಟ್ಟೆ ಕೇಳುತಿಹೆ ಬಿಸಿ ಬಿಸಿ ಹಪ್ಪಳ
ಬಿಡಿಸಿದಾಗ ಬಿಚ್ಚಿ ತಲೆ ಕಾಯುವ ಛತ್ರಿ
ಅದಿಲ್ಲದಿರೆ ನಿಸರ್ಗಕೆ ತಲೆದಂಡ :)

2 comments:

sunaath said...

ಮೋಡ ಮುಸುಕಿದ ಪ್ರಕೃತಿಯ ಚಿತ್ರದಲ್ಲಿ ಪ್ರಕೃತಿಯ ‘ಮೂಡು’ ಚೆನ್ನಾಗಿ ವ್ಯಕ್ತವಾಗಿದೆ.

Unknown said...

ಎತ್ತ ನೋಡಿದರತ್ತ ಹಸುರು
ಕಾನನ ಸಿರಿಯ ವೈಭವ
ಮೇಲೆ ತಣ್ಣನೆ ಮೋಡದ ಹೊದಿಕೆ
ಕೆಳಗೆ ಕುಳಿರ್ಚಳಿಯ ಹಾಸುಗೆ

ಎಲ್ಲೂ ಬಿತ್ತಿರದ ಬೆಳೆ
ಎಲ್ಲೆಲ್ಲೂ ಬೆಳೆದಿಹ ಕಳೆ
ಆ ನೆಲಕೆ ಬೇಕಿಹುದೀ ಮಳೆ
ಎಲ್ಯಾರಿಗೂ ಬೇಡದ ಮಳೆ

ಹನಿ ಹಾಕುತಿಹ ಜಟಿಪಿಟಿ ತಾಳ
ಹೊಟ್ಟೆ ಕೇಳುತಿಹೆ ಬಿಸಿ ಬಿಸಿ ಹಪ್ಪಳ
ಬಿಡಿಸಿದಾಗ ಬಿಚ್ಚಿ ತಲೆ ಕಾಯುವ ಛತ್ರಿ
ಅದಿಲ್ಲದಿರೆ ನಿಸರ್ಗಕೆ ತಲೆದಂಡ :)