Wednesday 16 May, 2007

ಚಿತ್ರಕವನ

ಕಣ್ಣೆದುರಲ್ಲಿ ಕಾಣುವುದನ್ನು ತನ್ನ ದೃಷ್ಟಿಗನ್ವಯವಾಗಿ ಸೆರೆಹಿಡಿಯುವುದು ಒಬ್ಬ ಕಲಾಕಾರನ ಸ್ವಾತಂತ್ರ್ಯ.
ಆ ಚಿತ್ರದಲ್ಲಿ ನೂರು ಕಥೆಗಳು, ಕವಿತೆಗಳು ಅಡಗಿರಬಹುದು...
ಚಿತ್ರ ಸೆರೆ ಹಿಡಿದವರು ಕಾಣದ ಇನ್ನೊಂದು ನೋಟವಿರಬಹುದು...
ಈ ರೀತಿಯ ವಿವಿಧ ನೋಟಗಳತ್ತ ಒಂದು ನೋಟ - ಈ ಪ್ರಯತ್ನ.
ವಾರಕ್ಕೊಂದು ಚಿತ್ರ - ಪೈಂಟಿಂಗ್ ಇರಬಹುದು, ಫೋಟೋ ಇರಬಹುದು, ಇಲ್ಲಿ ಕವಿಗಳ, ನೋಡುಗರ ದಾರಿ ಕಾಯುತ್ತಿರುತ್ತದೆ...
ಅದಕ್ಕೆ ಕವನ, ಬರಹ ಯಾರು ಬೇಕಾದರೂ ಬರೆಯಬಹುದು...
ಎಲ್ಲಾ ಆನ್ ಲೈನ್ ಕನ್ನಡಿಗರಿಗೆ ’ಚಿತ್ರಕವನ’ಕ್ಕೆ ಆಹ್ವಾನ...

1 comment:

Satish said...

ಬಹಳ ಒಳ್ಳೆಯ ಪ್ರಯತ್ನ, ಹೆಚ್ಚು ಹೆಚ್ಚು ಜನ ಚಿತ್ರಗಳನ್ನು, ಕವನಗಳನ್ನು ಕಳಿಸುತ್ತಾರೆನ್ನುವುದು ನನ್ನ ಆಶಯ...